ನಾನು ನಿನಗೆ ತಂಗಿಯ ಕೊಟ್ಟು ನೀನೆನೆಗೆ ಮೈದುನನಾದೆ.ನಾನು ನಿನಗೆ ಅಕ್ಕನ ಕೊಟ್ಟು ನೀನೆನಗೆ ಭಾವನಾದೆ.ನಾನು ನೀನೂ ಏನಹರೆಂಬುದ ತಿಳಿದುಅಣ್ಣನಿಗೆ ತಂಗಿ, ಅಕ್ಕನಿಗೆ ತಮ್ಮಇವರಿಬ್ಬರೂ ದೃಷ್ಟದಲ್ಲಿ ಒಡಹುಟ್ಟಿದರಾದ ಮತ್ತೆತಂಗಿಯ ಮಗಳು ಸೊಸೆಯಾಗಿ,ಅಕ್ಕನ ಮಗ ಅಳಿಯನಾದ ಚಿತ್ರವ ನೋಡಾ!ಒಂದು ಯೋನಿಯಲ್ಲಿ ಬಂದುದನರಿಯದೆ,ನಿನ್ನ ಒಡಹುಟ್ಟಿದ [ವ]ಳಿಗೆ ನೀ ಗಂಡನಾಗಿ,ಎನಗೆ ನೀ ಭಾವನಾದ ಪರಿಯ ನೋಡಿ ನಾಚಿಸಬಂದೆ.ಕಲಕೇತನಲ್ಲಿ ಕೊಳುಕೊಡೆ ಬೇಡಮೇಖಲೇಶ್ವರಲಿಂಗದ ಹೊಲಬ ತಿಳಿಯಬಲ್ಲಡೆ.-ಕಲಕೇತಯ್ಯ

Tags

Post a Comment

0 Comments
* Please Don't Spam Here. All the Comments are Reviewed by Admin.