ಶ್ರೀ ಕೋರಣೇಶ್ವರ ವಿರಕ್ತಮಠ - ಖಜೂರಿ

 ಶ್ರೀ ಕೋರಣೇಶ್ವರ ವಿರಕ್ತಮಠ - ಖಜೂರಿ

ಖಜೂರಿ ಗ್ರಾಮದ ಹೊರವಲಯದಲ್ಲಿ

ಸ್ಥಾಪನೆಯಾಗಿರುವ ಶ್ರೀ ಕೋರಣೇಶ್ವರ ವಿರಕ್ತಮಠ ಕಳೆದ ಶತಮಾನಲ್ಲಿ ಪ್ರಾರಂಭಗೊಂಡು

ಮಠವಾಗಿದ್ದು ಜಾಗೃತ ಸ್ಥಳವಾಗಿದೆ. ಕಾಸಾರ ಸಿರಸಿ

ಗ್ರಾಮದ ಕರಿಬಸವೇಶ್ವರ ಮಠದ ಆಗಿನ

ಮಠಾಧ್ಯಕ್ಷರಾದ ಶ್ರೀ ಕರಿಬಸವ ಶಿವಯೋಗಿಗಳು

ಧರ್ಮಪ್ರಚಾರಾರ್ಥ ಲೋಕಸಂಚಾರ ಕೈಗೊಂಡು

ಆಳಂದ ತಾಲ್ಲೂಕಿನ ಖಜೂರಿ ಗ್ರಾಮಕ್ಕೆ ಬಂದು

ಇಲ್ಲಿನ ಭೀಮರಾಯ ಅಲ್ಲಿ ಎಂಬುವವರ ರೋಗ

ಗುಣಮಾಡುತಾರೆ. ನಂತರದಲ್ಲಿ ಭೀಮರಾಯ

ಅಲ್ದಿಯವರೆಗೆ ಗಂಡು ಮಗು ಜನಿಸಿ ಆ

ಮಗುವನ್ನು ಕಾಸಾರ ಸಿರಸಿ... ಮಠಕ್ಕೆ

ಒಪ್ಪಿಸುತ್ತಾರಂತೆ ಎಂಬ ಐತಿಹ್ಯವಿದ್ದು ಆ ಮಗುವೇ

ಕಾಸಾರಸಿರಸಿಯ ಶ್ರೀ ಮುರುಘೇಂದ್ರ

ಮಹಾಸ್ವಾಮಿಗಳ ಕೃಪಾಶಿರ್ವಾದದಿಂದ ಬೆಳೆದು

ಸಂಸ್ಕಾರವನ್ನು ಪಡೆದು “ಶ್ರೀ ಕೋರಣೇಶ್ವರ” ರೆಂಬ

ಹೆಸರಲ್ಲಿ ಪ್ರಸಿದ್ದರಾದರು. ಶ್ರೀ ಕೋರಣೇಶ್ವರರು

ಲೋಕ ಸಂಚಾರದಲ್ಲಿ ಅನೇಕ ಭಕ್ತರಿಗೆ ಕರುಣೆಯನ್ನು ಪಾಲಿಸುತ್ತಾರೆ

ಗುರುಗಳು ಲಿಂಗೈಕ್ಯರಾದ ಸಮಾಧಿ ಸ್ಥಳದಲ್ಲಿ

ಮಠವು ರೂಪುಗೊಂಡು ಧಾರ್ಮಿಕ

ಕಾರ್ಯಗಳನ್ನು ನಡೆಸತೊಡಗಿದೆ.

Post a Comment

0 Comments
* Please Don't Spam Here. All the Comments are Reviewed by Admin.