ಮನಹೀನ ಬಂಟನ ಕೈಯಲ್ಲಿ ಬತ್ತೀಸಾಯುಧವಿದ್ದರೇನಯ್ಯ?ಜಾರಸ್ತ್ರೀ ಸರ್ವಾಭರಣವನಿಟ್ಟಿದ್ದರೇನಯ್ಯ?ಕುರುಡನ ಕೈಯಲ್ಲಿ ದರ್ಪಣವಿದ್ದರೇನಯ್ಯ?ಧರ್ಮವನರಿಯದವನ ಕೈಯಲ್ಲಿ ಹಣವಿದ್ದರೇನಯ್ಯ?ಜ್ಞಾನಹೀನ ರೂಪಧರಿಸಿದ್ದರೇನಯ್ಯ?ಪ್ರಾಣಲಿಂಗವನರಿಯದ ನರಗುರಿಗಳು ಅಂಗದ ಮೇಲೆಲಿಂಗವ ಕಟ್ಟಿದ್ದರೇನಯ್ಯ?ಇಂತೀ ಷಡ್ವಿಧ ಭೇದವನರಿಯದ ಭವಿಗಳುನಿಮ್ಮ ಹೊಲಬನವರೆತ್ತಬಲ್ಲರಯ್ಯ?ಇಟ್ಟು ಪೂಜೆಯ ಮಾಡುವ ಆ ದ್ರೋಹಿಗಳಿಗೆನಾನೇನೆಂಬೆನಯ್ಯ ಗೊಹೇಶ್ವರಪ್ರಿಯ ನಿರಾಳಲಿಂಗಾ.-ಗುಹೇಶ್ವರಯ್ಯ
0
June 11, 2022
Tags