ದೀನ ದುರ್ಬಲರ ಕಣ್ಣು ಬಸವಣ್ಣಹೊಲೆಯ ಮಾದಿಗರೆಂಬ ಬಲೆಯಾತ ಕಿತ್ತೆಸೆದಮನ ಮನಕೂ ಅರಿವಿನ ಛಳಿ ಹೊಡೆದ /ಬಸವಯ್ಯಾಸಕಲ ಜೀವರ ಪ್ರೇಮಿಯಾದಅಕ್ಕ ನಾಗಮ್ಮಳ ಅಕ್ಕರೆಯ ಮರೆಯದೆಬ್ರಾಹ್ಮಣ್ಯವನ್ನು ಕಿತ್ತೆಸೆದ / ಬಸವಣ್ಣಹೆಣ್ಣಿನ ಬಾಳಿಗೆ ಅಣ್ಣನಾದಹೆಣ್ಣು ಅಂಗನೆಯಲ್ಲ,ಹೆಣ್ಣು ಕುಟಿಲೆಯಲ್ಲಹೆಣ್ಣು ಉಳುಮೆಯ ಭೂಮಿ ಅಲ್ಲ / ಎಂದ್ಹೇಳಿಕಣ್ಣು ತೆರೆಸಿದ ಬಸವಯ್ಯಾಮೌಢ್ಯಗಳ ಬೆದಕಿದ, ಮೂಢರ ಕುಟುಕಿದವೇದ ವಿಪ್ರರ ಜಾಲಾಡಿ / ಬಸವಣ್ಣವೈದಿಕರ ಜಾಲ ಕತ್ತರಿಸಿದದೇವರು ದಿಂಡಿರು ಆಲಯದಲ್ಲಿಲ್ಲಎಲ್ಲರೊಳಗವನೂ ತುಂಬ್ಯಾನ / ಬಸವಣ್ಣಎಲ್ಲ ಎಲ್ಲೆಲ್ಲೂ ಝೆಂಕಾರಚೆನ್ನಯ್ಯ,ಕಕ್ಕಯ್ಯ ನನ್ನವರು ಎನ್ನುತ್ತಕಗ್ಗತ್ತಲ ಮನಸ್ಸಿಗೆ ಬೆಳಕಾದ / ಬಸವಯ್ಯಾಕಾರುಣ್ಯದ ರೂಪ ತಾನಾದಎಲ್ಲರ ಕರೆ ಕರೆದು ಪ್ರೀತಿಯ ಮಳೆಗರೆದುಅಂತಃಕರಣದ ಹೊಳೆ ಹರಿಸಿದ / ಬಸವಯ್ಯಾವಚನಗಳ ಮುತ್ತು,ರತ್ನವ ಸುರಿಸಿದವಚನಗಳ ಹೂಮಳೆಗೆ ನಾಡೆಲ್ಲ ಹಸಿರಾಗಿಕಣ ಕಣವು ವಚನಗಳ ತವನಿಧಿ / ಬಸವಣ್ಣದೀನ ದುರ್ಬಲರ ಕಣ್ಣಾದ೦ ವಿಶ್ವ ಸತ್ಯಂ ಪ್ರಿಯ ಬಸವಣ್ಣ
0
November 06, 2022
Tags