ಕ್ರೋಧ ಬಂದಲ್ಲಿ ಕೊಲ್ಲೆಂಬುದು,ದಯೆ ಬಂದಲ್ಲಿ ಬೇಡಾ ಎಂಬುದು,ಅದು ಅರಿವೊ? ಅಜ್ಞಾನವೊ? ಬೇರೊಂದು ಹೊಲಬೊ?ಮಾಡುವ ಕ್ರೀ ಜಡನೆಂಬುದು, ಕ್ರೀ ಹೊರಗಾದುದು ಅರಿವೆಂಬುದು,ಅದನರಿವುದು ಅದೇನು ಹೇಳಾ?ಆತ್ಮನರಿವೊ ಅದೇನು ಮರವೆಯೊ?ತೊಳೆದಡೆ ಮಡಿಯಾಗಿ ಮಾಸಿದಡೆ ಮೈಲಿಗೆಯಾಗಿಪುಸಿಯಹುದೊಂದೊ ಎರಡೊ?ಅರಿದಡೆ ತಾನೆಂಬ ಮರೆದಡೆ ಜಗವೆಂಬಉಭಯಕ್ಕೊಳಗಾಗದ ಮುನ್ನವೆ ಅರಿ, ಕಾಮಭಿೀಮ ಜೀವಧನದೊಡೆಯನ.- ಒಕ್ಕಲಿಗ ಮುದ್ದಣ್ಣ

Post a Comment

0 Comments
* Please Don't Spam Here. All the Comments are Reviewed by Admin.