ಕಾಯವಿದ್ದು ಕಾಬುದು ವಿಜ್ಞಾನ,ಜೀವವಿದ್ದು ಕಾಬುದು ಸುಜ್ಞಾನ,ಎರಡಳಿದು ತೋರಿಕೆಯಲ್ಲಿ ಕಾಬುದು ಪರಂಜ್ಯೋತಿಜ್ಞಾನ,ಇಂತೀ ಮೂರು ಮುಖವ ಏಕವ ಮಾಡಿಬೇರೊಂದು ಕಾಬುದು ಪರಮಪ್ರಕಾಶಜ್ಞಾನ.ಇಂತೀ ಅಂತರ ಪಟಂತರದಲ್ಲಿ ನಿಂದು ನೋಡುವ ಸಂದೇಹವ ಹರಿದ ಸಂದಿನಲ್ಲಿ ಕುಂದದ ಬೆಳಗು ತೋರುತ್ತದೆ, ಸದಾಶಿವಮೂರ್ತಿಲಿಂಗದಲ್ಲಿ.-ಅರಿವಿನ ಮಾರಿತಂದೆ

Post a Comment

0 Comments
* Please Don't Spam Here. All the Comments are Reviewed by Admin.