ದೇಹ ನಾನೆಂದು ನಂಬಿದೆ, ಎಲೆ ಮನವೆ.ದೇಹದಲ್ಲಿಹ ಗುಣಂಗಳು ನಿನ್ನಲ್ಲಿ ಕಂಡಯ್ಯಾ ಮನವೆ.ಪೃಥ್ವಿಯ ಗುಣ ಶಾಂತಿ, ಉದಕದ ಗುಣ ಸ್ವಾದ,ಅಗ್ನಿಯ ಗುಣ ಸರ್ವಭಕ್ಷಣ, ವಾಯುವಿನ ಗುಣ ನಿರ್ಮಲತ್ವ,ಆಕಾಶದ ಗುಣ ನಿರ್ವಯಲು.ಈ ಪಂಚತತ್ವದ ಗುಣ ನಿನ್ನಲ್ಲಿರಲು,ನೀನೆ ಪಂಚಮುಖ ನೋಡಾ ಮನವೆ,ಕಪಿಲಸಿದ್ಧಮಲ್ಲಿಕಾರ್ಜುನಾ.- ಸಿದ್ಧರಾಮೇಶ್ವರ

Post a Comment

0 Comments
* Please Don't Spam Here. All the Comments are Reviewed by Admin.