ಹೊತ್ತಾರಿನ ಹೊತ್ತು ಮಲಮೂತ್ರ ವಿಸರ್ಜನಕ್ಕೆ ಹೋಯಿತ್ತು.ಮಧ್ಯಾಹ್ನದ ಹೊತ್ತು ಹಸಿವು ತೃಷೆಗೆ ಹೋಯಿತ್ತು.ಮೂರನೆಯ ಜಾವದ ಹೊತ್ತು ಹೊಟ್ಟೆತುಂಬಿದ ಬಳಿಕ,ಕಾಯದ ಕಳವಳವ ಕೈಕೊಂಬುದಯ್ಯಾ.ಇರುಳಾದ ಬಳಿಕ ನಿದ್ರೆಗೈದು,ಬೆಳಗಾಹನ್ನಬರ ಸತ್ತಂತಿಹೆನು ಹೆಣನಾಗಿ ಏನುವನರಿಯದೆ.ಅಯ್ಯಾ, ನಿಮ್ಮ ನೆನೆವವರ ಚರಣಕ್ಕೆ ಶರಣೆಂಬೆನಯ್ಯಾ,ಬಸವಪ್ರಿಯ ಕೂಡಲಚೆನ್ನಸಂಗಮದೇವಾ.- ಸಂಗಮೇಶ್ವರದ ಅಪ್ಪಣ್ಣ

Post a Comment

0 Comments
* Please Don't Spam Here. All the Comments are Reviewed by Admin.