ದಾರಿಯಲ್ಲಿ ಬೀದಿಯಲ್ಲಿ ಮನೆಗಳಲ್ಲಿಹೊನ್ನು ಹೆಣ್ಣು ಮಣ್ಣಿನ ಮೇಲಣ ಕಾಮವಿಕಾರ ತೋರಿದಡೆಅದಕ್ಕೇನೂ ಶಂಕೆಯಿಲ್ಲ.ಅದೇನು ಕಾರಣವೆಂದಡೆ:ಚಿತ್ರದ ಹುಲಿ, ಕನಸಿನ ಹಾವು. ಜಲಮಂಡುಕ ಕಚ್ಚಿ ಸತ್ತವರುಂಟೆ?ಇದು ಕಾರಣ ಜಾಗ್ರಸ್ವಪ್ನಸುಷುಪ್ತಿಗಳಲ್ಲಿ ಕಾಮವಿಕಾರ ತೋರಿತ್ತೆಂದುಶಸ್ತ್ರ ಸಮಾಧಿ ನೀರು ನೇಣು ವಿಷ ಔಷಧಿಗಳಿಂದ ಘಟವ ಬಿಟ್ಟಡೆ,ಆತ ಗುರುದ್ರೋಹಿ, ಲಿಂಗದ್ರೋಹಿ, ಜಂಗಮದ್ರೋಹಿ.ಇದು ಭಕ್ತರಾಚರಣೆ, ವಿರಕ್ತನಿರ್ಣಯ.ಇಂತಪ್ಪವರಿಗೆ ಸದ್ಯೋಜಾತಲಿಂಗವುಂಟಿಲ್ಲವೆಂದೆನು.-ಅವಸರದ ರೇಕಣ್ಣ

Tags

Post a Comment

0 Comments
* Please Don't Spam Here. All the Comments are Reviewed by Admin.