*ನಿಜ ದೈವ*ಬಸವನೆಂಬ ಹೆಸರು ಜಗವನು ಹಸನು ಗೊಳಿಸುವುದು.ಬಸವನೆಂಬ ಬಳ್ಳಿಯು ನ್ಯಾಯ ನೀತಿಯ ಹರಡುವುದು.ಬಸವನೆಂಬ ಜ್ಯೋತಿಯು ಅಜ್ಞಾನವ ಅಳಿಸುವುದು.ಬಸವನೆಂಬ ಭಿತ್ತಿಯು ಮೆತ್ತಿದ ಮೌಢ್ಯವ ಸುಡುವುದು.ಕಾಯಕವೇ ಜೀವನಕ್ಕೆ ಪಾಕವೆಂದು ಸಾರಿದ ದೈವ.ಸಮಾನತೆಯೇ ಸಮರಸಕೆ ಮೂಲವೆಂದ ಮಾನವ.ಲಿಂಗ ತಾರತಮ್ಯವು ಅಂಗಕೆ ಬೇಡವೆಂದ ಬಾಂಧವ.ಜಾತಿ ಭೇದದ ನೀತಿಯನ್ನು ಖಂಡಿಸಿದ ನಿಜದೇವ.ನುಡಿದಂತೆ ನಡೆದು ನಾಡಿಗೆಲ್ಲ ಹೆಸರಾದ ಕ್ರಾಂತಿಕಾರಡಾಂಭಿಕ ಬದುಕು ಬೂಟಾಟಿಕೆ ಎಂದ ವಚನಕಾರ.ಮೋಸ ವಂಚಕರ ವೇಷ ಕಳಚಿ ಪರಿವರ್ತಿಸಿದ ವೀರ.ನೈಜ ಸೇವೆಯಿಂದ ಸಾರ್ಥಕ ಜೀವನವೆಂದ ಧೀರ. ಎಸ್ ಎಸ್ ಪೂಜಾರ.
0
May 02, 2022
Tags