*@ಹೆತ್ತವ್ವ ನಿಜದೈವ@*ಭತ್ತಲಾರದ ಒರತಿ ತರ ಬಿಡದೆತುತ್ತ ಮಾಡಿ ತಿನಿಸುವ ಹೆತ್ತವ್ವಅವಳ ಬಗ್ಗೆ ಎಷ್ಟು ಹೇಳಿದರುಕತಿ ಮುಗಿಯುವುದಿಲ್ಲ ಬಿಡವ್ವಯಾಕಂದ್ರ ದೇವ್ರ ನೀನ ಅಲ್ವೆನವ್ವ.ಬಾಡಿಗೆ ಸಿಕ್ಕ ಎತ್ತು ದುಡಿದಂಗಕತ್ತೆ ಭಾರವ ಹೊತ್ತು ನಡದಂಗಹಸುವಿನ ಹಾವಭಾವ ಬಿಡ್ದಂಗನಡೆದುಕೊಂಡು ಹೋಗು ಅವ್ವನೀ ಬೇರೆ, ಮತ್ತ ದೇವ್ರ ಬೇರೆ ಎನವ್ವ.ಕತ್ತಲಾದ್ರ ಬೆಳಕ ಹಚ್ಚಾಕ ನೋಡತಿಬಿಸಿಲು ಮಳೆ ಹೆಚ್ಚಾದ್ರ ಮುಚ್ಚಿಡತಿಮಂದ್ಯಾಗ ಮಕ್ಕಳು ಎದ್ದ್ಕಾಲ್ನೇಂತಿದುಃಖವನ್ನ ಗೊತ್ಮಾಡ್ದ ಮುಚ್ಚಿಡ್ತೇವ್ವಕಷ್ಟವ ಕಳಿಯುವ ನೀನು ನಿಜ ದೇವ್ರವ್ವ.ಗಂಡಗ ಬೆನ್ನಾಸರ ಊರಗೋಲಾದಿಮಕ್ಕ್ಳಮರಿಗೆಲ್ಲಾ ಗುರುಮಾತೆಯಾದಿಹಂತಿತರ ಸುತ್ತುವವರಿಗೆ ಮೇಟಿಯಾದಿಬುದ್ದಿಗೇಡಿ ಮಂದಿಗೆ ರುದ್ರಿಯಾದೆವ್ವತಿದ್ದಿ ಬುದ್ದಿ ಹೇಳು ನೀನ್ಮುಂದ ಮತ್ಯಾರವ್ವಕಷ್ಟ ನಷ್ಟ ಆದ್ರು ಒಂಚೂರು ಹೇಳದ,ಹೊಟ್ಯಾಗ ಇಟ್ಕೋಂಡು ಸಹಿಸ್ಕೊಂಡು,ಗಂಡಾ,ಮಕ್ಕಳನ್ನ ಸಮಾನವಾಗಿ ಕಂಡಿ,ಮನಿ ಭಾರ ಬೆನ್ನಮ್ಯಾಲ ಹೊತ್ಕೊಂಡೆವ್ವ,ಎಲ್ಲಾ ದೇವ್ರಕ್ಕಿಂತ ದೊಡ್ಡದೇವ್ರ ನೀ ಅಲ್ವೇನವ್ವ.ಬಡತನ ಸಿರಿತನಕ್ಕ ನೀ ಸೊರಗುವುದಿಲ್ಲತೊಂದ್ರೆ ತಾಪತ್ರಯಗಳಿಗೆ ಹೆದರುವುದಿಲ್ಲಕುಟುಂಬ ಬಂಧು ಬಳಗಕ್ಕ ನೀ ಸಿಹಿಬೆಲ್ಲಅಲ್ಲಾದವರಿಗೆ ನೀ ಎಂದು ಸೇರುದಿಲ್ಲವ್ವಕಲ್ಲಿನಂತವರಿಗೂ ಕರುಣಿಸುವ ಕ್ಷಮಾಧರಿತ್ರೆವ್ವದೇವರು ದೈವ ಅಂತ ಹುಡುಕುವ ನಮ್ಮಂತಮೂರ್ಖರಿಗೆ ನಿನ್ನ ತ್ಯಾಗ ಸಹನೆ ಪ್ರೀತಿ ನೀತಿಗೊತ್ತಾಗದ ಕಲ್ಲು ಮಣ್ಣು ಗಿಡ ಮರ ಸುತ್ತುತ್ತತಿರುಗವರಿಗೆ ನಿನ್ನ ಮಹತ್ವ ಗೊತ್ತಾಗುದಿಲ್ಲವ್ವಯಾಕಂದ್ರ ನೀ ಗೊತ್ತಾಗ್ದಂಗ ಕಾಪಾಡು ದೇವ್ರವ್ವ.ದೀಪದಂಗ ಸುಟ್ಟುಕೊಂಡು ಬೆಳಕು ಜ್ಞಾನಕೊಡೊ ಜ್ಯೋತಿ ಸ್ವರೂಪ ನೀನಲ್ವೇನವ್ವಹೆತ್ತವ್ವ ಜೀವ ರಾಶಿ ಹೊತ್ತ ಭೂಮಿತೂಕ್ದವ್ವನೆಲ ಜಲ ಗಾಳಿಯಂಗ ನೀ ನಮಗಾಸರವ್ವಆ ಈ ದೇವ್ರಗಿಂತ ನಿಜ ದೈವ ನೀನ ನೋಡವ್ವ.ಶರಣು ಎಸ್ ಪೂಜಾರ.
0
May 08, 2022
Tags