ಇಚ್ಛೆಯನಾಡಿದರೆ ಲೋಕ ಮಚ್ಚುವುದು ಬೆರವುದುಕಚ್ಚೆಗಡುಕರ ಸಂಗವ ಮಾಡುವ ಕರ್ಮಸಾಕುಚುಚ್ಚಕರು ಚುಲ್ಲಕರು ಮುಕ್ತಿಯ ಬೇಡಲರಿಯರುನಚ್ಚಬೇಡ ಅವರಿಂದ ನರಕ ತಪ್ಪದು.ಹುಚ್ಚಾಗಿ ಹೋಗುವರೆ ಹುದುಗು ಹುಸಿಕರನಿಶ್ಚಯವಿಲ್ಲದವರ ಸಂಗಉಚ್ಚೆಯಲಿ ಮಿಂದಂತೆ ಬಚ್ಚಿಟ್ಟ ದ್ರವ್ಯವ ಬಂಕುಲಿಗೆ ಹಾಕುವರು.ನುಚ್ಚಕಟ್ಟಬಾರದ ಅರಿವೆಯಲ್ಲಿ ನುರುಕಿದ ರಂಗೋಲೆ ನಿಲುವುದೆ ?ಮಚ್ಚಿದ ದಾಸಿ ವೇಸಿಗೆ ಹರಿವ ಕರ್ಮಿಗೆ ಸಿಕ್ಕುವನೆ ಶಿವ ?ಲಕ್ಷಕೊಬ್ಬ ಮುಗ್ಧ ದಶಲಕ್ಷಕೊಬ್ಬ ಸಿದ್ಧನಿಶ್ಚಯ ಕೋಟಿಗೊಬ್ಬ ಪುರಾತಅಚ್ಚಲಿಂಗೈಕ್ಯರು ಅಪೂರ್ವ ಕಾಣಾಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.-ವೀರಸಂಗಯ್ಯ

Post a Comment

0 Comments
* Please Don't Spam Here. All the Comments are Reviewed by Admin.