ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿದೇಹವೆ ದೇವಾಲಯ ಮಾಡಿದವರು ಬಸವಾದಿಶರಣರು ವಾಸ್ತವ ಜಗತ್ತಿನಲ್ಲಿ ಹೆಣ್ಣು ಮಣ್ಣು ಹೊನ್ನು ಕೋಪ ಕ್ರೋದ ಮದ ಮತ್ಸರ ಅಹಂಕಾರ ಇವು ಅಲ್ಲದೆ ಯವ್ವನದಲ್ಲಿ ಹರಟೆ ಹವ್ಯಾಸ ಚಟಗಳು ನಿತ್ಯ ಪರರಮನೆ ಪರರ ವಸ್ತು ಪಡೆಯುವ ಹಂಬಲವಿರುವವರು ಸ್ಥಾವರ ಸ್ಥಳಗಳಿಗೆ ಹೋಗುವ ಮುನ್ನ ಪರಿಶುದ್ಧವಾದ ಮನಸ್ಸು ಭಾವನೆ ಇರಬೇಕು ಆಹಾರ ಪದಾರ್ಥಗಳನ್ನು ಸ್ವೀಕರಿಸಿ ಹೊಗಬಾರದು ಆದರೆ ಅಹಂಕಾರವೇಂಬ ಮದಗಜವೇರಿ ವಿಧಿಗೆ ಗುರಿಯಾದವರು ಮನಸಾಕ್ಷಿಯಿಂದ ನಡೆದುಕೊಳ್ಳಬೇಕು ದೇವಸ್ಥಾನ ಹೊರ ಆಚರಣೆ ಒಳಗಿರುವ ಅಗೋಚರ ಮನಸ್ಸು ಒಳ್ಳೆಯ ಆಲೋಚನೆ ಒಳ್ಳೆಯ ಮನಸ್ಸು ಇದ್ದರೆ ಸಾಕು ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ವಿಶ್ವ ಪಥ ನನ್ನೊಳಗೆ ನಾನು ತಿಳಕೊಂಡು ಅರಿವು ಆಚಾರ ಅನುಭಾವ ಹಂಚಿಕೊಳ್ಳಲು ಮನಸ್ಸು ಪಕ್ವವಾಗದ ಹೊರತು ಹೊರಗೆತೊಳೆದು ಮಡಿ ಮೈಲಿಗೆ ಬರಿ ನೀರು ಮಡಿ ಮನಸ್ಸು ಹೊಲಸು ವಿಚಾರಮಾಡಿದರೆ ಪಕ್ಕಾಮಡಿ ಕಚ್ಚಾಮಡಿ ಹೊರಗಿನ ಮಡಿಗಿಂತ ಒಳಶುದ್ಧವಾಗುವದು ನಿಜವಾದ ಮಡಿ

Post a Comment

0 Comments
* Please Don't Spam Here. All the Comments are Reviewed by Admin.