ಭಾಗ್ಯವುಳ್ಳ ಪುರುಷಂಗೆ ಕಾಮಧೇನುಕಾಮಿಸಿದುದನೀವುದಯ್ಯಾ.ನಿರ್ಭಾಗ್ಯ ಪುರುಂಷಗೆ ಕಾಮಧೇನುತುಡುಗುಣಿಯಾಗಿ ತೋರುವುದಯ್ಯಾ.ಸತ್ಯಪುರುಷಂಗೆ ಕಲ್ಪವೃಕ್ಷಕಲ್ಪಿಸಿದುದನೀವುದಯ್ಯಾ.ಅಸತ್ಯಪುರುಷಂಗೆ ಕಲ್ಪವೃಕ್ಷಬೊಬ್ಬುಳಿಯಾಗಿ ತೋರುವುದಯ್ಯಾ.ಧರ್ಮಪುರುಷಂಗೆ ಚಿಂತಾಮಣಿಚಿಂತಿಸಿದುದನೀವುದಯ್ಯಾ.ಅಧರ್ಮಪುರುಷಂಗೆ ಚಿಂತಾಮಣಿಗಾಜಿನಮಣಿಯಾಗಿ ತೋರುವುದಯ್ಯಾ.ಶ್ರೀಗುರು ಕಾರುಣ್ಯವುಳ್ಳ ಸದ್ಭಕ್ತಂಗೆಜಂಗಮಲಿಂಗವಾಗಿ ತೋರುವುದಯ್ಯಾ.ಭಕ್ತನಲ್ಲದ ಪಾಪಿಷ್ಠಂಗೆ ಜಂಗಮಲಿಂಗಮಾನವನಾಗಿ ತೋರುವುದಯ್ಯಾ.ಉರಿಲಿಂಗಪೆದ್ದಿಗಳರಸು ಒಲ್ಲನವ್ವಾ.- ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ

Post a Comment

0 Comments
* Please Don't Spam Here. All the Comments are Reviewed by Admin.