ಪ್ರಥಮದಲ್ಲಿ ರುದ್ರತ್ವ;ಅದು ಘಟಿಸಿದಲ್ಲಿ ಈಶ್ವರತ್ವ.ಈ ಎರಡು ಕೂಡಿದಲ್ಲಿ ಸದಾಶಿವತತ್ವ.ಇಂತೀ ತ್ರಿವಿಧಲೀಲೆ ಏಕಾರ್ಥವಾದಲ್ಲಿಪರಶಿವತತತ್ತ್ವದ ಪರಮಪ್ರಕಾಶ.ಇದರಿಂದ ಮೀರುವ ತೆರನುಂಟಾದಡೆ ನೀವು ಹೇಳಿನಾ ಮಾರ್ಕೊಳ್ಳೆನು.ನೀವು ಹೇಳಿದಂತೆ ನಾ ಪ್ರಸಾದವೆಂಬೆನು.ಆರು ಶೈವದ ಭೇದ,ಮೂರು ಶೈವದ ಭಜನೆ,ಷsಡುದರ್ಶನದ ತರ್ಕಇವನೆಲ್ಲವನುದ್ಧರಿಸಬಂದ ಪ್ರಭುದೇವರು,ಬಸವಣ್ಣ, ಚೆನ್ನಬಸವಣ್ಣಇವರೊಳಗಾದ ಏಳ್ನೂರೆಪ್ಪತ್ತಮರಗಣಂಗಳು,ಸ್ವತಂತ್ರ ಸಂಬಂಧಿಗಳಪ್ಪ ಪ್ರಥಮರುಶಿವಾಚಾರ ಚಕ್ರವರ್ತಿಗಳು,ಸತ್ಯರು ನಿತ್ಯರು ಸದ್ಯನ್ಮುಕ್ತರುಸುಮನರು ವಿಮಲರು ಪೂರ್ಣರು ಪರಿಪೂರ್ಣರುಮೇಖಲೇಶ್ವರಲಿಂಗದಲ್ಲಿ ಮಹಾನುಭಾವಿಗಳು.- ಕಲಕೇತಯ್ಯ
0
September 24, 2021