ಭಕ್ತನ ಮೆಲಬಾರದು, ಭವಿಯ ತಿನಬಾರದು.ಭಕ್ತನ ಕೊಂದಡೆ ಪಂಚಮಹಾಪಾತಕ.ಅಂತು ವಿಚಾರಿಪಡೆ ಶೀಲವಂತರಿಲ್ಲಾಗಿ ಉಪಚಾರವೆಂತೂ ಇಲ್ಲ.ಅಂತು ಶೀಲವಂತರಲ್ಲಿ ಅಹಿಂಸಾ ಪರಮೋಧರ್ಮವೆಂದುಕೊಲ್ಲದೆ ಮೆಲ್ಲದೆ ತಿಂಬ ಜೈನರಿನ್ನಾರೊ ?ಶಿವೋ ದಾತಾ ಶಿವೋ ಭೋಕ್ತಾ ಶಿವೋ ಜಗತ್ಸರ್ವಂಎಂದುದಾಗಿ, ಈ ಅನುವನರಿದಾತ ಭಕ್ತ.ಇಂತಪ್ಪ ಯುಕ್ತ, ಆತನೇ ಯುಕ್ತ.ಇಂತಪ್ಪ ಸುಯಿಧಾನಿಗಳ ತೋರಿ ಬದುಕಿಸಯ್ಯಾ,ನಿಜಗುರು ಭೋಗೇಶ್ವರಾ, ನಿಮ್ಮ ಧರ್ಮ, ಬೇಡಿಕೊಂಬೆನು.-ಭೋಗಣ್ಣ
0
May 22, 2022
Tags