ನಿನ್ನ ಹರೆಯದ ರೂಹಿನ ಚೆಲುವಿನ, ನುಡಿಯ ಜಾಣಿನ,ಸಿರಿಯ ಸಂತೋಷದ,ಕರಿ ತುರಗ ರಥ ಪದಾತಿಯ ನೆರವಿಯ,ಸತಿ ಸುತರ ಬಂಧುಗಳ ಸಮೂಹದ,ನಿನ್ನ ಕುಲದಭಿಮಾನದಗರ್ವವ ಬಿಡು, ಮರುಳಾಗದಿರು.ಅಕಟಕಟಾ ರೋಮಜನಿಂದ ಹಿರಿಯನೆ?ಮದನನಿಂ ಚೆಲುವನೆ?ಸುರಪತಿಯಿಂದ ಸಂಪನ್ನನೆ?ವಾಮದೇವ ವಶಿಷ್ಟರಿಂದ ಕುಲಜನೆ?ಅಂತಕನ ದೂತರು ಬಂದು ಕೈವಿಡಿದೆಳದೊಯ್ಯುವಾಗನುಡಿ ತಡವಿಲ್ಲ ಕೇಳೋ ನರನೆ!ಎನ್ನ ಮಾಹಾಲಿಂಗ ತ್ರಿಪುರಾಂತಕದೇವರ ಪೂಜಿಸಿಯಾದರೆಕೇಡಿಲ್ಲದ ಪದ ದೊರಕೊಂಬುದು ಮರುಳೆ.-ಕಿನ್ನರಿ ಬ್ರಹ್ಮಯ್ಯ
0
February 03, 2023
Tags