ಸಂಸಾರ ಮಾಯೆ ಅತಿದುಃಖ ಹೊಲ್ಲೆಂದು,ಅತ್ಮಜ್ಞಾನದಿಂದ ನಿತ್ಯಸುಖಿಯಪ್ಪುದೆ ಲೇಸೆಂದು,ಅರಿದವಂಗಾದ ಹೊಲ್ಲೆಹವೇನು?ಇದನೊಲ್ಲದವಂಗಾದ ಲೇಸೇನು ಹೇಳಾ!ಈ ದೇಹದಲುಣಬೇಡಿದ ಇಷ್ಟ ಕರ್ಮ ಇದಾವ ದೇಹಿಗೆ ಮಾದುದೊ?ನಿನ್ನ ನೀನೇ ಭಾವಿಸಿ ತಿಳಿದು ನೋಡಾ,ಸಿಮ್ಮಲಿಗೆಯ ಚೆನ್ನರಾಮನಿಕ್ಕಿದಸಂಸಾರದ ತೊಡಕು ಬಿಡಸಬಾರದು!- ಚಂದಿಮರಸ
test
March 16, 2023