ವಿಜ್ಞಾನಭೈರವ ತಂತ್ರ ದಲ್ಲಿ ದೀಕ್ಷೆ ಬೇಕಾಗುತ್ತದೆಯೇ ?ಅದು ಮುಖ್ಯವೇ.ದೀಕ್ಷೆ ಎಂದರೆ ಏನು ಎಂಬುದನ್ನು ಮೊದಲು ತಿಳಿಯಿರಿ. ಗುರುಗಳಿಂದ, ಶಿಷ್ಯರಿಗೆ ,ವರ್ಗವಾಗುವ ಶಕ್ತಿಯನ್ನು ದೀಕ್ಷೆ ಎನ್ನುತ್ತಾರೆ. ನೀರು ಕೆಳಗೆ ಹರಿಯುವ ರೀತಿ, ಶಕ್ತಿಯೂ ಸಹ ಕೆಳಗೆ ಹರಿಯುತ್ತದೆ. ಯಾರು ಸ್ವೀಕರಿಸುವುದಕ್ಕೆ ಅರ್ಹರಾಗಿರುತ್ತಾರೆಯೋ ಅವರು ಗುರುಗಳ ಈ ಶಕ್ತಿಯನ್ನು, ಶುದ್ಧ ಶಕ್ತಿಯನ್ನು ಜ್ಞಾನೋದಯದ ಶಕ್ತಿಯನ್ನು, ಸ್ವೀಕರಿಸಲು ಅರ್ಹರಾಗುತ್ತಾರೆ, ಯಾರಿಗೆ ಶರಣಾಗತಿಯ ಮನಸ್ಸು ಇದೆಯೋ, ಯಾರು ವಿಧೇಯರೋ ಅವರು ಅರ್ಹರಾಗುತ್ತಾರೆ. ಅದಿಲ್ಲದೆ ನೀವೇ ಎತ್ತರದಲ್ಲಿ, ಶಿಖರದಲ್ಲಿ ಇದ್ದರೆ, ಶಕ್ತಿಯು ಆಗ ಹರಿಯಲು ಸಾಧ್ಯವಿಲ್ಲ. ನೀವು ವಿಭಿನ್ನ ರೀತಿಯ ಎತ್ತರದಲ್ಲಿ ಇರುವಿರಿ, ಅದು 'ಅಹಂಕಾರದ ಎತ್ತರ' ಶಕ್ತಿಯ ಎತ್ತರವಿಲ್ಲ. ಆನಂದದ, ಇರುವಿಕೆಯ ಅರಿವಿನ ಎತ್ತರ ಅಲ್ಲ. ಅಹಂಕಾರದ ಸಾಂದ್ರತೆ ಹೆಚ್ಚು 'ನಾನು' ಎಂಬ ಶಿಖರ, ಈ ಸ್ಥಿತಿಯಲ್ಲಿ ದೀಕ್ಷೆ ಸಾಧ್ಯವಿಲ್ಲ. ಅಹಂಕಾರ ಬೇಲಿಯಾಗುತ್ತದೆ. ಅದು ನಿಮ್ಮ ಶರಣಾಗತಿಗೆ ಅಡ್ಡವಾಗುತ್ತದೆ.ಶಿಷ್ಯನಾಗಲು, ದೀಕ್ಷೆ ಪಡೆಯಲು, ತಾನು ಶರಣಾಗಿರಬೇಕು. ಶರಣಾಗತಿ ಎಂದರೆ ಪೂರ್ಣ ಶರಣಾಗತಿ, ಸ್ವಲ್ಪವಲ್ಲ. ಅಹಂಕಾರದ ಶರಣಾಗತಿಯಾದರೆ ಮಾತ್ರ ನೀವು ಸ್ವೀಕೃತಿಯ ಸ್ಥಿತಿಯಲ್ಲಿ ಇರಬಹುದು. ಆಗ ಹರಿಯುವಿಕೆ ಸುಲಭವಾಗುತ್ತದೆ. ನಾನು ಸಾಂಕೇತಿಕವಾಗಿ ಮಾತನಾಡುತ್ತಿಲ್ಲ. ವಾಸ್ತವಿಕವಾಗಿ ಹೇಳುತ್ತಿದ್ದೇನೆ. ನೀವು ಎಂದಾದರೂ ಪ್ರೀತಿಸಿರುವಿರಾ? ಎರಡು ದೇಹಗಳ ಮಧ್ಯೆ ಪ್ರೀತಿ ಅದು ನಿಜವಾದ ಹರಿವು, ಶಕ್ತಿಯು ವರ್ಗಾಯಿಸಲ್ಪಡುತ್ತದೆ, ಹಾಗೂ ಪುನಹ - ಕೊಡುತ್ತದೆ. ಸ್ವೀಕರಿಸುತ್ತದೆ. ಇಬ್ಬರೂ ಅಹಂಕಾರದ ಶಿಖರದಲ್ಲಿ ಇದ್ದರೂ ಸಹ ಪ್ರೀತಿಸಬಹುದು.ಗುರುಗಳ ಬಳಿ ಇದು ಅಸಾಧ್ಯ. ಒಂದೇ ರೇಖೆಯಲ್ಲಿ ಇರುವುದಕ್ಕೆ ಆಗುವುದಿಲ್ಲ. ದೀಕ್ಷೆ ಅಸಾಧ್ಯವಾಗುತ್ತದೆ. ಪ್ರೀತಿ ಸಾಧ್ಯವಾದರೂ ಸಹ ದೀಕ್ಷೆ ಸಾಧ್ಯವಾಗುವುದಿಲ್ಲ. ನೀವು ಕೆಳಗಡೆ ಇದ್ದು, ವಿಧೇಯರಾಗಿದ್ದರೆ, ಶರಣಾಗತಿ ಆಗಿದ್ದರೆ, ಸ್ವೀಕೃತಿಯ ಮನೋಭಾವದಲ್ಲಿದ್ದರೆ-ಶಿಷ್ಯನು ಗರ್ಭಧರಿಸುವ ಹೆಣ್ಣಿನಂತೆ ಸ್ವೀಕೃತಿಯಲ್ಲಿದ್ದರೆ, ಗುರುಗಳು ಪುರುಷರಾಗಿ ಕೊಡುತ್ತಾರೆ.ಗುಪ್ತವಾಗಿ ಕೊಡುವ ಈ ದೀಕ್ಷೆಯು ಈಗ ಪೂರ್ಣವಾಗಿ ನಿಂತಿದೆ, ನಾಗರೀಕತೆ, ಶಿಕ್ಷಣ, ಸಂಸ್ಕೃತಿ ಹೆಚ್ಚಾದ ಹಾಗೆ ನಾವು ಇನ್ನು ಹೆಚ್ಚು ಅಹಂಕಾರಿಗಳಾಗಿದ್ದೇವೆ. ಆದರಿಂದ ಶರಣಾಗತಿ ಅಸಾಧ್ಯವಾಗಿದೆ.ದೀಕ್ಷೆ ಎಂದರೆ, ಗುರುಗಳಿಗೆ ಲಭಿಸಿರುವ ನಿಜವಾದ ಶಕ್ತಿಯನ್ನು ವರ್ಗಾಯಿಸುವುದು. ಅದಕ್ಕೆ ನಂಬಿಕೆ ಬೇಕು. ಮುಂದೆ ಏನಾಗುತ್ತದೆ ಎಂಬುದು ಗೊತ್ತಿಲ್ಲ. ನೀವು ಕತ್ತಲಲ್ಲಿ ಇರುವಿರಿ, ಗುರುಗಳಿಗೆ ಮಾತ್ರ ಮುಂದೆ ಏನಾಗುತ್ತದೆ ಎಂದು ಗೊತ್ತಿರುವುದು. ಮಾನವರಲ್ಲಿ ಹಲವಾರು ತೊಂದರೆಗಳು ಇರುವುದರಿಂದ ಮುಂದೆ ಆಗುವುದನ್ನು ತಿಳಿಸಲು ಸಾಧ್ಯವಿಲ್ಲ. ಆಗುವುದಕ್ಕಿಂತ ಮುಂಚೆ ಅದನ್ನು ಹೇಳಿದರೆ, ಆಗುವುದು ಬದಲಾಗುತ್ತದೆ. ಅದರಿಂದ ಹೇಳಬಾರದು ಹಾಗೂ ಹೇಳುವುದಕ್ಕೆ ಆಗುವುದಿಲ್ಲ. ಗುರುಗಳು ಅದನ್ನು ನಿಮಗೆ ಮಾಡಬಹುದು. ಅಂದರೆ, ದೀಕ್ಷೆ ಕೊಡಬಹುದು. ಅದು ನಿಮ್ಮಲ್ಲಿ ಚಾಲನೆ ಉಂಟುಮಾಡುತ್ತದೆ. ಅದು ನಿಮ್ಮನ್ನು ಬದಲಾಯಿಸುತ್ತದೆ, ಶುಚಿ ಮಾಡುತ್ತದೆ. ಬೇಕಾಗಿರುವ ಒಂದೇ ಒಂದು, ವಿಷಯವೆಂದರೆ ನಂಬಿಕೆ. ಅದಿಲ್ಲದ ಬಾಗಿಲುಗಳು ತೆರೆಯುವುದಿಲ್ಲ. ನೀವು, ನಿರಂತರ ನಿಮ್ಮನ್ನು ಸಮರ್ಥಿಸಿಕೊಳ್ಳದೆ ತೆರೆದಿರಬೇಕು. ಯಾರಾದರೂ ನನಗೆ ಏನಾದರೂ ಮಾಡಿದರೆ ಎಂಬ ಭಯದಿಂದ ಮುಕ್ತರಾಗಿ ಇದ್ದರೆ ಮಾತ್ರ ಗುರುಗಳು ನಿಮ್ಮೊಳಗೆ ಪ್ರವೇಶ ಪಡೆಯಬಹುದು.ಉದಾ: ಒಬ್ಬ ಹೆಂಗಸಿನ ಅನುಮತಿ ಇಲ್ಲದೆ ಆಕೆಯನ್ನು ಪ್ರೀತಿಗಾಗಿ, ಮಿಲನಕ್ಕಾಗಿ, ಬಲಾತ್ಕಾರ ಮಾಡಬಹುದು. ಅದು ದೇಹದಲ್ಲಿ ಸಾಧ್ಯ. ಆದರೆ ದೀಕ್ಷೆ ಹಾಗಲ್ಲ. ಗುರುಗಳು ನಿಮ್ಮ ಆತ್ಮದಲ್ಲಿ ಇಳಿಯುತ್ತಾರೆ. ದೇಹದಲ್ಲಿ ಅಲ್ಲ. ನೀವು ತಯಾರಿದ್ದರೆ ಮಾತ್ರ ಅದು ಸಾಧ್ಯ. ಇಲ್ಲಿ ಬಲಾತ್ಕಾರ ಅಸಾಧ್ಯ.ಭಯ, ಭೀತಿ ಬಿಟ್ಟು ನಂಬಿಕೆಯಿಂದ ಗುರುಗಳು ಕೊಡುವ ದೀಕ್ಷೆಯನ್ನು ಸ್ವೀಕರಿಸಿದರೆ, ಶತಮಾನಗಳಲ್ಲಿ ಮಾಡುವ ಕೆಲಸಗಳನ್ನು ಕ್ಷಣದಲ್ಲಿ ಮಾಡಬಹುದು. ಏನಾಗುತ್ತದೆ ಎಂಬ ಅರಿವು ನಿಮಗೆ ಬರಲು ಸಾಧ್ಯವಿಲ್ಲದಿರುವುದರಿಂದ ನಂಬಿಕೆಯೇಇಲ್ಲಿ ಮುಖ್ಯವಾಗುತ್ತದೆ. ದೀಕ್ಷೆಯ ನಂತರ ಶಿಷ್ಯನದು ಪುನರ್ಜನ್ಮವಾಗುತ್ತದೆ. ಅವನೇ ಮತ್ತೆ ಹುಟ್ಟುತ್ತಾನೆ.(ಗುರುಗಳು ತಮ್ಮ ಹಸ್ತದಿಂದ ಶಕ್ತಿಯನ್ನ ವರ್ಗಾಯಿಸಬಹುದು ಕಾಲಿನ ಹೆಬ್ಬೆರಳಿನಿಂದ ಅಥವಾ ಕೋಲಿನ ಮುಖಾಂತರವೂ ಅವರು ತಮ್ಮ ಜ್ಞಾನೋದಯದ ಶಕ್ತಿಯನ್ನು ವರ್ಗಾಯಿಸಬಹುದು. ಇನ್ನು ಹಲವಾರು ಕೇಂದ್ರಗಳು ಇವೆ, ಇದು ರಹಸ್ಯ ಗುರುಗಳಿಗೆ ಮಾತ್ರ ಗೊತ್ತಿರುತ್ತದೆ. ಗುರುಗಳು ನಿಮ್ಮ ಎದೆಯ ದೇಹದ ಹೃದಯ ಭಾಗ, ತಲೆಯ ಮೇಲಿನ ಭಾಗ ಹಳೆತ್ತಿ, ಹಾಗೂ ಭೂ ಮಧ್ಯ ಸ್ಪರ್ಶಿಸಬಹುದು) . OSHO🙏🙏🙏
0
July 01, 2023
Tags