ಓಂಶ್ರೀಗುರುಬಸವಲಿಂಗಾಯನಮಃ ಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿ ಯಾರು ದೊಡ್ಡವರು? ಭೂಮಿಯ ಮೇಲಿನ ಸಕಲ ಜೀವಾವಳಿಗೆ ಲೇಸಬಯಸಿದವರೋದೇವರು ಧರ್ಮ ಹೆಸರಿನಲ್ಲಿ ವಂಶಪರಂಪರೆಯ ಸರ್ವಾಧಿಕಾರಿ ಆಡಳಿತಮಾಡವವರೋ ? ಮೈಮನ ಶ್ರಮ ಸೇವೆ ಮಾಡುವವರೋ?ಯಾರೋ ಗಳಿಸಿದ ಆಸ್ತಿ ಮಠ ಗುಡಿ ದೇವಸ್ಥಾನದ ಅಧಿಕಾರ ಬಳಸಿ ಮನೆ ಹೊಲ ಖರಿದಿ ಮಾಡಿದವರೋ, ಕುಳುಕುತ್ತ ನೀರು ಪಿತ್ತ ತಿರಿಕಿ ಕುಳು ತಿಂದು ಬಡಜನರ ಮೇಲೆ ಬಡ್ಡಿ ಪಡೆದವರೋ ? ಯಾರು ಹಿತವರು ? ಜಾತ್ರೆ ಯಾತ್ರೆ ಮಾಡಲು ಭಕ್ತರ ಮನೆ ಮನ ಒತ್ತಡ ಹೇರಿ ಚಂದಾ ವಸುಲಿ ಮಾಡಿ ರಥೋತ್ಸವ ಮಾಡುವವರು ಯಾರು ದೊಡ್ಡವರು? ಬಂಗಾರ ಕೀರಿಟ ಹಾಕಿಕೊಂಡು ಧರ್ಮ ಸಂದೇಶ ಕೊಡುವವರು ?ಸಾವು ಖಚಿತ ಯಾವಕ್ಷಣದಲ್ಲಿ ಸಾವು ಬರುತ್ತದೆ ಅಂತಾ ತಿಳಿಸಿಹೇಳಲು ಸಾಧ್ಯವಿಲ್ಲ ಯಾರು ದೊಡ್ಡವರು ? ತಪ್ಪು ಮಾಡಿ ಧರ್ಮದ ಹೆಸರಿನಲ್ಲಿ ಅನ್ಯಾಯ ಮಾಡುವವರು ಧರ್ಮದ ಹೆಸರಿನಲ್ಲಿ ಕೊಲೆ ಸುಲಿಗೆ ಪ್ರಾಣಿಬಲಿ ಕೊಡುವವರು ಆತ್ಮ ಸಾಕ್ಷಿ ವಿರುದ್ಧ ನಡೆಯುವವರಿಗೆ ಶಿಕ್ಷೆ ಇಲ್ಲ ಅವರು ದೊಡ್ಡವರೋ ? ಸಮಾಜ ಸುಧಾರಣೆ ನಾಟಕ ಪ್ರದರ್ಶನ ಮಾಡುವ ಸಮಾಜ ದೇವರು ಹೆಸರಿನಲ್ಲಿ ಸರಕಾರದ ಹಣ ಪಡೆಯುವವರು ದೊಡ್ಡವರೋ?ಭೃಷ್ಟಾಚಾರ ಮಾಡಿ ಪಾಪ ಕಳೆದುಕೊಳ್ಳಲು ಅಭಿಷೇಕ ಅರ್ಚನೆ ಬೆಳ್ಳಿ ಬಂಗಾರ ಮೂರ್ತಿ ಮಾಡಿ ದೇವರ ಹೆಸರಿನಲ್ಲಿ ನಡೆಯುವವರು ದೊಡ್ಡವರೋ?ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಘನ ಮಹಿಮೆ ತಿಳಿಯದ ಪಾಪಿಗಳು ದುಷ್ಟರು ಜಡದೇಹಿಗಳು ನಿಮ್ಮ ತ್ಯಾಗ ಸೇವೆ ಉಪಕಾರ ಸಹಿಸದ ಪಾಪಿಗಳು ದೊಡ್ಡವರು ಆಗಲಾರರು ಹೃದಯ ಸಿಂಹಾಸನ ಆರೋಹಣ ಮಾಡಿದ ನಿಮ್ಮ ಮಹಿಮೆ ಕಂಡು ಹೊಟ್ಟೆ ಕಿಚ್ಚು ಪಡುವವರು ದೊಡ್ಡವರಲ್ಲ
0
September 15, 2023
Tags